ರಾಜಕೀಯದ ಬುಗುರಿ ಬಿಟ್ಟು ಎಳೆ ಮಕ್ಕಳಂತೆ ಬುಗುರಿ ಆಡಿದ ಕುಡಚಿ ಶಾಸಕ ಪಿ. ರಾಜೀವ - ಮಕ್ಕಳ ಬುಗುರಿ ಆಡಿದ ಕುಡಚಿ ಶಾಸಕ ಪಿ. ರಾಜೀವ
ಚಿಕ್ಕೋಡಿ : ರಾಜಕೀಯ ಮರೆತು ಕುಡಚಿ ಮತಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ ತಮ್ಮ ಕಚೇರಿ ಮುಂದೆ ಬುಗರಿ ಆಡಿದ್ದಾರೆ. ಸದ್ಯ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಶಾಸಕ ಪಿ.ರಾಜೀವ, ನೆಲಕ್ಕೆ ಬುಗುರಿ ಎಸೆದು ದಾರದ ಸಹಾಯದಿಂದ ಕೈಯಲ್ಲೇ ಬುಗುರಿ ತಿರುಗಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕರ ಬುಗುರಿ ಆಟದ 30 ಸೆಕೆಂಡ್ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.