ಚಲಿಸುತ್ತಿದ್ದ ಬಸ್ ಟೈರ್ ಸ್ಫೋಟ... ತಪ್ಪಿದ ಭಾರೀ ಅನಾಹುತ - ಬಸ್ ಟೈರ್ ಸ್ಪೋಟ
ಕೊಪ್ಪಳ: ಚಲಿಸುತ್ತಿದ್ದ ಸಾರಿಗೆ ಬಸ್ನ ಹಿಂಬದಿ ಟೈರ್ ಸ್ಪೋಟಗೊಂಡು ಅದೃಷ್ಟವಶಾತ್ ಅನಾಹುತ ತಪ್ಪಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು - ನರಸಾಪುರ ಮಧ್ಯದ ಕುಷ್ಟಗಿ ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಗಾಯಗೊಂಡಿದ್ದಾಳೆ. ಪ್ರಯಾಣಿಕರನ್ನು ಬೇರೆ ಬಸ್ ಮೂಲಕ ಚಾಲಕ, ನಿರ್ವಾಹಕರು ಕಳುಹಿಸಿದ್ದಾರೆ.