ನೋಡು ಬಾರ ಹಾವೇರಿಯ ಕನ್ನಡ ತೇರ... ಬಸ್ಸಿನಲ್ಲೊಂದು ಸಾಹಿತ್ಯಲೋಕ - ಕನ್ನಡ ರಾಜ್ಯೋತ್ಸವ
ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಕೂಡ ಒಂದು. ಆದರೂ ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ಮಾಡುವುದು ಇಂದಿನ ದಿನಗಳಲ್ಲಿ ಅಗತ್ಯ ಎನಿಸುತ್ತಿದೆ. ಕನ್ನಡಿಗರಾದವರು ಯಾರಾದರೂ ಸರಿಯೇ ಕನ್ನಡಕ್ಕಾಗಿ ಕೈ ಎತ್ತಬೇಕಾಗಿದೆ. ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ ಹಾವೇರಿ ಸಾರಿಗೆ ಇಲಾಖೆಯ ಚಾಲಕ ಮತ್ತು ನಿರ್ವಾಹಕ.