ನಮ್ ತಾಯಿ ಸತ್ಯವಾಗಲೂ ಎಸ್‌ಟಿ ಹೋರಾಟಕ್ಕೆ ಸಿದ್ದರಾಮಯ್ಯನವರನ್ನು ಕರೆದಿದ್ದೇನೆ.. ಸಚಿವ ಈಶ್ವರಪ್ಪ - ಸಿದ್ದರಾಮಯ್ಯ, ಈಶ್ವರಪ್ಪ
ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ನನ್ನನ್ನ ಚರ್ಚೆಗೆ ಕರೆದೇ ಇಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ನಮ್ಮ ತಾಯಿ ಸತ್ಯವಾಗಲ್ಲೂ ಅವರನ್ನು ಕರೆದಿದ್ದೇನೆ. ನನ್ನ ಮಕ್ಕಳಾಣೆಗೂ ಅವರನ್ನ ಕರೆದಿದ್ದೇನೆ. ಇನ್ನೂ ಯಾವ ಭಾಷೆಯಲ್ಲಿ ಹೇಳಲಿ.. ಸ್ವಾಮೀಜಿಗಳು ಅವರ ಮನೆಗೆ ಹೋಗಿ ಕುಳಿತು ಕರೆದು ಬಂದಿದ್ದಾರೆ. ಈ ವಿಚಾರದಲ್ಲಿ ಯಾಕೆ ರಾಜಕಾರಣ ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ಚಿಕ್ಕಮಗಳೂರಿನ ಬೀರೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.