ಶಿವಮೊಗ್ಗದಲ್ಲಿ ಮನೆ ದೇವರ ಪೂಜೆ ನೆರವೇರಿಸಿದ ಸಚಿವ ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮನೆ ದೇವರಾಗಿರುವ ಚೌಡೇಶ್ವರಿ ಹಾಗೂ ಮಲ್ಲೇಶ್ವರನಿಗೆ ಪೂಜೆ ಸಲ್ಲಿಸಿದರು. ಶಿವಮೊಗ್ಗದಲ್ಲಿರುವ ತಮ್ಮ ಮನೆಯಿಂದ ದೇವರ ವಿಗ್ರಹವನ್ನು ತಮ್ಮ ತಲೆಯ ಮೇಲೆ ಹೊತ್ತು ದೇವಾಲಯದವರೆಗೂ ತೆರಳಿ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಮತ್ತೆ ದೇವರನ್ನು ತಲೆಯ ಮೇಲೆ ಹೊತ್ತು ಮನೆಗೆ ಮರಳಿದ ಬಳಿಕ ಅವರ ಮನೆಯ ಆವರಣದಲ್ಲಿ ಹೋಮ-ಹವನ ನಡೆಯಿತು.