ಆರ್ಯ ವೈಶ್ಯ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಕೆ.ಎಸ್ ಈಶ್ವರಪ್ಪ - ಆರ್ಯ ವೈಶ್ಯ ಸಮುದಾಯ
ಶಿವಮೊಗ್ಗ: ಆರ್ಯ ವೈಶ್ಯ ಸಮಾಜದ ಸಮುದಾಯ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಗುದ್ದಲಿ ಪೂಜೆ ನೆರವೇರಿಸಿದರು. ನಗರದ ಸಾಗರ ರಸ್ತೆಯಲ್ಲಿರುವ ಆರ್ಯ ವೈಶ್ಯ ಸಮುದಾಯದ ಜಾಗದಲ್ಲಿ ಗುದ್ದಲಿ ಪೂಜೆಯನ್ನ ನೆರವೇರಿಸಲಾಯಿತು. ಸಚಿವರಿಗೆ ಆರ್ಯ ವೈಶ್ಯ ನಿಗಮದ ಅಧ್ಯಕ್ಷರಾದ ಡಿ.ಎಸ್ ಅರುಣ್, ಮಹಾನಗರ ಪಾಲಿಕೆ ಉಪ ಮಹಾಪೌರರಾದ ಚನ್ನಬಸಪ್ಪ ಸಾಥ್ ನೀಡಿದರು.