ಹೂವುಗಳಿಂದ ಕಂಗೊಳಿಸುತ್ತಿದೆ ಕೆಆರ್‌ಎಸ್.. ಮತ್ತಷ್ಟು ಮುದ ನೀಡುತ್ತಿದೆ ಸಂಗೀತ ಕಾರಂಜಿ!
ಕೃಷ್ಣರಾಜ ಸಾಗರ ಈ ದಸರಾದಲ್ಲಿ ಮತ್ತಷ್ಟು ಕಂಗೊಳಿಸುತ್ತಿದೆ. ಇಷ್ಟು ದಿನ ವಿದ್ಯುತ್ ದೀಪಾಲಂಕಾರದಿಂದ ಗಮನ ಸೆಳೆದಿದ್ದ ಬೃಂದಾವನಕ್ಕೆ ಈಗ ಹೂವಿನ ಅಲಂಕಾರ ಮೆರುಗು ನೀಡಿದೆ. ಸಂಗೀತ ಕಾರಂಜಿಯ ಜೊತೆಗೆ ಸುಮಾರು 10 ಸಾವಿರಕ್ಕೂ ಹೆಚ್ಚಿನ ಅಲಂಕಾರಿಕ ಪುಷ್ಪಗಳಿಂದ ಕಂಗೊಳಿಸುತ್ತಿರುವ ಕೆಆರ್‌ಎಸ್ ಬೃಂದಾವನ ವಿವಿಧ ಆಕೃತಿಗೆ ಹೂವುಗಳ ಅಲಂಕಾರ ಮಾಡಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ. ಕೆಆರ್‌ಎಸ್ ಬೃಂದಾವನದ ಗಾಜಿನ ಮನೆಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. 10ಸಾವಿರಕ್ಕೂ ಅಧಿಕ ಬಣ್ಣಬಣ್ಣದ ಹೂವಿನ ಪ್ರದರ್ಶನ ಜೊತೆಗೆ ಹಣ್ಣುಗಳ ಮೇಲೆ ವಿವಿಧ ವ್ಯಕ್ತಿಗಳ ಚಿತ್ರಗಳ ಕೆತ್ತನೆ ಪ್ರದರ್ಶನ ಆಯೋಜಿಸಲಾಗಿದೆ. ಆನೆ, ಒಂಟೆ, ಗೊಂಬೆಗಳಿಗೆ ಬಣ್ಣದ ಪುಷ್ಪಗಳಿಂದ ಅಲಂಕಾರ ಮತ್ತಷ್ಟು ಮೆರೆುಗು ತಂದಿದೆ. ಹಣ್ಣುಗಳ ಮೇಲೆ ಅಂಬರೀಶ್, ವಿಷ್ಣುವರ್ಧನ್, ರಾಜಕುಮಾರ್ ಸೇರಿ ಹಲವಾರ ನಟರ ಭಾವಚಿತ್ರ ಕೆತ್ತನೆ ಮಾಡಿರೋದು ಎಲ್ಲರನ್ನೂ ಇತ್ತ ಆಕರ್ಷಿಸುತ್ತಿದೆ.