ಇಂದಿನಿಂದ ಕೆಆರ್‌ಎಸ್ ಓಪನ್: ಮೊದಲ ದಿನ ಪ್ರವಾಸಿಗರಿಲ್ಲದೇ ಬೃಂದಾವನ ಖಾಲಿ ಖಾಲಿ! - ಮಂಡ್ಯ ಸುದ್ದಿ
ಕೆಆರ್‌ಎಸ್‌ನ ಬೃಂದಾವನ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದೆ. ಕಾರಂಜಿ ನೃತ್ಯ ಕಣ್ಮನ ಸೆಳೆಯುತ್ತಿದೆ. ಆದರೆ ಆರಂಭವಾದ ಮೊದಲ ದಿನ ಪ್ರವಾಸಿಗರ ಕೊರತೆ ಕಾಣಿಸಿದೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್‌ನ ಬೃಂದಾವನ ಮೊದಲ ದಿನ ಖಾಲಿ ಖಾಲಿಯಾಗಿತ್ತು. ಕೇವಲ ಬೆರಳೆಣಿಕೆಯ ಪ್ರವಾಸಿಗರು ಇಂದು ಭೇಟಿ ನೀಡಿದ್ದಾರೆ. ಜಲಾಶಯ ತುಂಬಿದ್ದರೂ ಜಲಾಶಯದ ಸೊಬಗು ಸವಿಯಲು ಪ್ರವಾಸಿಗರು ಭಯಗೊಂಡಿದ್ದಾರೆ. ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿದ್ದ ಬೃಂದಾವನ ಇಂದಿನಿಂದ ಪ್ರವಾಸಿಗರಿಗೆ ತೆರೆದಿದ್ದು, ಅಧಿಕಾರಿಗಳು ಕೊರೊನಾ ಮುನ್ನೆಚ್ಚರಿಕೆ ವಹಿಸಿದ್ದಾರೆ.