ಅನರ್ಹರ ತೀರ್ಪಿಗೂ ಮುನ್ನವೇ ಸಜ್ಜಾಯ್ತು ಕೆ.ಆರ್.ಪೇಟೆ ಉಪ ಚುನಾವಣಾ ಕಣ - ರಾಜಕೀಯ ಜಿದ್ದಾಜಿದ್ದಿಗೆ ಕೆ.ಆರ್.ಪೇಟೆ ಉಪ ಚುನಾವಣೆ ಕಣ ಸಜ್ಜು
ಅನರ್ಹರ ಪ್ರಕರಣದ ತೀರ್ಪು ಏನೇ ಬರಲಿ, ರಾಜಕೀಯ ಜಿದ್ದಾಜಿದ್ದಿಗೆ ಕೆ.ಆರ್.ಪೇಟೆ ಉಪ ಚುನಾವಣೆ ಕಣ ಸಜ್ಜಾಗುತ್ತಿದೆ. ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಪ್ರಚಾರಕ್ಕೆ ಧುಮುಕಿದ್ದು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜೊತೆಗೆ, ತಮ್ಮ ಬೆಂಬಲಿಗರ ಸಭೆಯನ್ನು ಮಾಡೋ ಮೂಲಕ ಅಖಾಡವನ್ನು ಸಜ್ಜುಗೊಳಿಸುತ್ತಿದ್ದಾರೆ. ಅತ್ತ ಜೆಡಿಎಸ್ ನಾಯಕರೂ ಟಿಕೆಟ್ ಗಾಗಿ ಲಾಬಿ ಶುರು ಮಾಡಿದ್ದಾರೆ. ಇದರ ಮಧ್ಯೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಎಚ್.ಡಿ.ಕೆ. ಕಾರಣ ಎಂಬ ಆರೋಪವೂ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ.