ವಲಸಿಗರನ್ನು ನಿಯಂತ್ರಿಸಲು ಬಿಜೆಪಿಯವರೇ ಸಿಡಿ ಮಾಡಿಸಿದ್ದಾರೆ: ಎಂ.ಲಕ್ಷ್ಮಣ್ ಆರೋಪ - ಸಿಡಿ ಪ್ರಕರಣ
ಮೈಸೂರು: ಬಿಜೆಪಿಯವರೇ ವಲಸಿಗರನ್ನು ನಿಯಂತ್ರಿಸಲು ಸಿಡಿ ಮಾಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು ಸಿಡಿ ಬಂದು 10 ದಿನ ಕಳೆದರೂ ಅದರ ಬಗ್ಗೆ ದೂರು ದಾಖಲಾಗಿಲ್ಲ. ಈಗ ಆ ಸಿಡಿ ನಕಲಿ ಎಂದು ಹೇಳುತ್ತಿದ್ದಾರೆ. ಮೊದಲು ಸಿಡಿ ಬಗ್ಗೆ ದೂರು ದಾಖಲಿಸಲಿ, ತನಿಖೆ ಕೈಗೊಳ್ಳಲಿ. ಆಮೇಲೆ ಅದು ನಕಲಿಯೋ ಅಥವಾ ಅಸಲಿಯೋ ಗೋತ್ತಾಗಲಿದೆ ಎಂದರು. ಮುಂಬೈಗೆ ಹೋದ ಕೆಲವು ವ್ಯಕ್ತಿಗಳನ್ನು ಹತೋಟಿಯಲ್ಲಿಡಲು ಬಿಜೆಪಿಯವರೇ ಸಿಡಿ ಮಾಡಿಸಿದ್ದಾರೆ. ಅದಕ್ಕೆ ಹೆದರಿ 6 ಮಂದಿ ಸಚಿವರು ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದು ಲಕ್ಷ್ಮಣ್ ದೂರಿದರು.