ಕರ್ನಾಟಕ

karnataka

ETV Bharat / videos

ತುಂಬಿದ ಆಲಮಟ್ಟಿ... ಸಂತ್ರಸ್ತರ ಬದುಕು ಕಟ್ಟಿಕೊಟ್ಟರೆ ಬಾಗಿನ ಅರ್ಪಣೆಗೆ ಸಮ ಎಂದ ಕೈ ನಾಯಕ - ಆಲಮಟ್ಟಿ

By

Published : Sep 16, 2019, 8:51 PM IST

ವಿಜಯಪುರ: ಆಲಮಟ್ಟಿ ಜಲಾಶಯವು ಗರಿಷ್ಠ ನೀರಿನ ಮಟ್ಟ ತಲುಪಿದೆ. ಆದರೆ ಮೈದುಂಬಿ ಹರಿಯುತ್ತಿರುವ ಜಲಾಶಯಕ್ಕೆ ಇನ್ನೂ ಬಾಗಿನ ಅರ್ಪಣೆಯಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈ ಕುರಿತು ಸ್ಥಳೀಯ ಕಾಂಗ್ರೆಸ್ ನಾಯಕರ ಮಾತುಗಳು ಭಿನ್ನವಾಗಿದೆ. ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಜನ ಮನೆ-ಮಠ ಕಳೆದುಕೊಂಡಿದ್ದಾರೆ, ಬೆಳೆ ನಷ್ಟವಾಗಿದೆ, ಇದರ ಕಡೆ ಸರ್ಕಾರ ಗಮನ ಹರಿಸಲಿ. ಸಂತ್ರಸ್ತರ ಬದುಕು ಕಟ್ಟಿಕೊಟ್ಟರೆ ಅದು ಪ್ರತಿ ತಾಯಂದಿರಿಗೆ ಬಾಗಿನ ಅರ್ಪಣೆ ಮಾಡಿದ ಹಾಗೆ, ಮುತ್ತೈದೆಯರ ಬದುಕನ್ನ ಉಳಿಸಿಕೊಟ್ಟ ಹಾಗೆ. ಅವರ ಕಣ್ಣೀರು ಒರೆಸಿದರೆ, ಆ ತಾಯಂದಿರು ಹರಸಿದರೆ ಅದು ಬಾಗಿನ ಅರ್ಪಣೆಗೆ ಸಮ. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಬಂದು ಬಾಗಿನ ಅರ್ಪಿಸಿಲ್ಲ ಎನ್ನುವುದಕ್ಕಿಂತ ಇಲ್ಲಿನ ನೆರೆ ಸಂತ್ರಸ್ತರ ನೆರವಿಗೆ ಸರ್ಕಾರ ಸ್ಪಂದಿಸುವುದು ಮುಖ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.

ABOUT THE AUTHOR

...view details