ಕೋಲಾರದ ಕೋಟಿಲಿಂಗೇಶ್ವರ ದೇವಾಲಯ ಜಿಲ್ಲಾಡಳಿತದ ವಶಕ್ಕೆ - Kotilangeshwara Temple news
ಭೂಮಿ ಮೇಲಿನ ಕೈಲಾಸ ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ಕ್ಷೇತ್ರದ ಉತ್ತರಾಧಿಕಾರಿ ವಿವಾದಕ್ಕೆ ನ್ಯಾಯಾಲಯ ಸದ್ಯಕ್ಕೆ ಬ್ರೇಕ್ ಹಾಕಿದ್ದು, ಇದೀಗ ದೇವಾಲಯ ಜಿಲ್ಲಾಡಳಿತ ಸುಪರ್ದಿಗೆ ಒಳಪಟ್ಟಿದೆ. ಆದ್ರೆ, ಕೋಟಿಲಿಂಗೇಶ್ವರ ಹಾಗೂ ಇದಕ್ಕೆ ಸೇರಿದ ಆಸ್ತಿ ನಮಗೆ ಸೇರಬೇಕು ಅಂತ ನಿರ್ಮಾತೃ ಸಾಂಭಶಿವಮೂರ್ತಿ ಅವರ ಪುತ್ರ ಪಟ್ಟು ಹಿಡಿದಿದ್ದಾರೆ.