ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಒಲಿದಿರೋದು ರಾಷ್ಟ್ರಕ್ಕೇ ಹೆಮ್ಮೆಯ ವಿಚಾರ: ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ಧಾರ್ಮಿಕ ಸಂತ ಪೇಜಾವರ ಶ್ರೀಗಳು, ಅಕ್ಷರ ಸಂತ ಹರೇಕಳ ಹಾಜಬ್ಬರು, ಕೊಂಕಣ ರೈಲ್ವೆ ರೂವಾರಿ ಜಾರ್ಜ್ ಫರ್ನಾಂಡೀಸ್, ಸೆರಗಲ್ಲೇ ಸಸಿಗಳನ್ನು ಎತ್ತಿಕೊಂಡು ಹೋಗುವಂತಹ ತುಳಸಿ ಗೌಡ ಇವರೆಲ್ಲರಿಗೆ ಪದ್ಮವಿಭೂಷಣ, ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿರೋದು ನಮಗೆ ಅತ್ಯಂತ ಸಂತೋಷದಾಯಕ ವಿಚಾರ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅದರಲ್ಲೂ ಇಡೀ ದ.ಕ.ಜಿಲ್ಲೆಗೆ ಹರೇಕಳ ಹಾಜಬ್ಬರಂತಹ ಅಕ್ಷರ ಸಂತನಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿರೋದು ಇಡೀ ರಾಷ್ಟ್ರವೇ ಹೆಮ್ಮೆಪಡುವಂತಹ ವಿಚಾರ. ಹಾಜಬ್ಬ ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರ. ಇವರೆಲ್ಲರಿಗೂ ಜಿಲ್ಲಾಡಳಿತದ ಪರವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ತಿಳಿಸಿದರು.