ಮಲೇಷಿಯಾದಲ್ಲಿರುವ ಗದಗ ಯುವಕನಿಂದ ಕೊರೊನಾ ಕುರಿತು ಜಾಗೃತಿ.. - ಮಳೇಶಿಯಾದದಿಂದ ಕೊರೊನಾ ಜಾಗೃತಿ ಮೂಡಿಸಿದ ಯುವಕ
ಜಗತ್ತಿನಾದ್ಯಂತ ಕೊರೊನಾ ಅಟ್ಟಹಾಸ ಹಿನ್ನೆಲೆ ಮಲೇಷಿಯಾದ ಕೌಲಾಲಂಪುರ್‌ದಲ್ಲಿ ಎಂಬಿಎ ಶಿಕ್ಷಣ ಪಡೆಯುತ್ತಿರುವ ಗದಗ ಮೂಲದ ಕಿರಣ್ ಎಂಬ ಯುವಕ, ಮಹಾಮಾರಿ ಕೊರೊನಾ ಕುರಿತು ಜಾಗೃತಿ ಮೂಡಿಸಿರುವ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಮಲೇಷಿಯಾದಲ್ಲಿನ ಸದ್ಯದ ಪರಿಸ್ಥತಿ ಬಗ್ಗೆಯೂ ವಿವರಿಸಿದ್ದಾರೆ. ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಹೇಳಿರುವ ಕಿರಣ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಲಾಕ್ಡೌನ್ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.