ಹಾವೇರಿ: ಆರನೇ ದಿನಕ್ಕೆ ಕಾಲಿಟ್ಟ ಕೊರಡೂರು ಗ್ರಾಮಸ್ಥರ ಪ್ರತಿಭಟನೆ - ಕೊರಡೂರು ಗ್ರಾಮಸ್ಥರ ಪ್ರತಿಭಟನೆ
ಹಾವೇರಿ: ಅತಿವೃಷ್ಟಿ ಮತ್ತು ಧಾರಾಕಾರ ಮಳೆಯಿಂದ ಮನೆ ಕಳೆದುಕೊಂಡ ತಾಲೂಕು ಕೊರಡೂರು ಗ್ರಾಮಸ್ಥರು ಆರಂಭಿಸಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ. ಹೊಸಕಿತ್ತೂರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸುತ್ತಿರುವ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೂಸಕಿತ್ತೂರು ವ್ಯಾಪ್ತಿಗೆ ಬರುವ ಕೊರಡೂರಿನ 26 ಮನೆಗಳು 2019 ರ ಅತಿವೃಷ್ಟಿಗೆ ಧರೆಗುರುಳಿದ್ದವು. ಈ ಕುರಿತಂತೆ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ. ಕೊರಡೂರು ಗ್ರಾಮದಲ್ಲಿ ಕಡಿಮೆ ಪ್ರಮಾಣದಲ್ಲಿ ಬಿದ್ದ ಮನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಪೂರ್ತಿ ಬಿದ್ದ ತಮ್ಮ ಮನೆಗಳಿಗೆ ಹಣ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಅಧಿಕಾರಿಗಳು ಮತ್ತು ಜನಪ್ರತಿನಧಿಗಳು ತಮ್ಮ ಸಮಸ್ಯೆಗೆ ಸ್ಪಂದಿಸುವವರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.