ಕರ್ನಾಟಕ

karnataka

ETV Bharat / videos

ಸೂಚನಾ ಫಲಕ ಇಲ್ಲದ ಕಾರಣ ನಿಟ್ಟಾಲಿ ಕ್ರಾಸ್​​ನಲ್ಲಿ ಅಪಘಾತ ನಡೆದಿದೆ: ಕೊಪ್ಪಳ ಎಸ್ಪಿ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್

By

Published : Nov 20, 2020, 5:33 PM IST

ಜಿಲ್ಲೆಯ ಕುಕನೂರು ತಾಲೂಕಿನ ನಿಟ್ಟಾಲಿ ಕ್ರಾಸ್ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 367ರ ಕಾಮಗಾರಿ ಇನ್ನೂ ನಡೆಯುತ್ತಿದ್ದು, ಅಲ್ಲಿ ಯಾವುದೇ ಸೂಚನಾ ಫಲಕ ಇಲ್ಲದ ಕಾರಣ ನಿಟ್ಟಾಲಿ ಕ್ರಾಸ್​ನಲ್ಲಿ ಭೀಕರ ಅಪಘಾತ ನಡೆದಿದೆ ಎಂಬುದು ಪ್ರಾಥಮಿಕವಾಗಿ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹೇಳಿದರು. ನಿಟ್ಟಾಲಿ ಕ್ರಾಸ್​ನಿಂದ ಹೈವೇ ಪ್ರವೇಶಿಸಿದ ಬೈಕ್​ಗೆ ಮಿನಿ ಬಸ್ ಡಿಕ್ಕಿ ಹೊಡೆದಿದೆ. ರಸ್ತೆ ಕಾಮಗಾರಿ ಇನ್ನೂ ನಡೆಯುತ್ತಿರುವುದರಿಂದ ಅಲ್ಲಿ ಸೂಚನಾ ಫಲಕ ಇಲ್ಲ. ಹೀಗಾಗಿ ಈ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಪಘಾತಕ್ಕೆ ಯಾರು ಕಾರಣ ಎಂಬುದು ತನಿಖೆಯ ವೇಳೆ ಗೊತ್ತಾಗಲಿದೆ. ಘಟನೆಯಲ್ಲಿ ಈಗ ಒಟ್ಟು ನಾಲ್ಕು ಜನರು ಸಾವನ್ನಪ್ಪಿದ್ದಾರೆ. 20 ಜನರು ಗಾಯಗೊಂಡಿದ್ದಾರೆ. ಈ ಪೈಕಿ 6 ಜನ ಗಾಯಾಳುಗಳ ಪರಸ್ಥಿತಿ ವಿಷಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.

ABOUT THE AUTHOR

...view details