'ಪಾಪು' ನಿಧನಕ್ಕೆ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರ ಸಂತಾಪ - ಡಾ. ಪಾಟೀಲ್ ಪುಟ್ಟಪ್ಪ ನಿಧನಕ್ಕೆ ಸಂತಾಪ
ಹಿರಿಯ ಪತ್ರಕರ್ತ, ಸಾಹಿತಿ, ಹೋರಾಟಗಾರ, ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಅವರ ನಿಧನಕ್ಕೆ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ಮೀಡಿಯಾ ಕ್ಲಬ್ ನಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಅಗಲಿದ ಹಿರಿಯ ಚೇತನದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಮೌನಾಚರಣೆ ನಡೆಸಿ ಸಂತಾಪ ಸೂಚಿಸಿದರು.