ಪಿಎಸ್ಐ ಆದಳು ಕೊಪ್ಪಳದ ಯುವತಿ... ಬಡತನದ ಬೆಂಕಿಯಲ್ಲಿ ಅರಳಿದ ಹೂ ಫರೀದಾ! - ಕೊಪ್ಪಳ ಹೂ ಮಾರುವವನ ಮಗಳು ಪಿಎಸ್ಐ
ತನ್ನೊಂದಿಗೆ ಹೂ ಕಟ್ಟಿ ಮಾರಾಟ ಮಾಡುತ್ತಿದ್ದ ಮಗಳು ದೊಡ್ಡ ಅಧಿಕಾರಿಯಾಗಿ ನೋಡಬೇಕೆಂಬ ಆಸೆಯನ್ನು ಸಣ್ಣ ಹೂ ವ್ಯಾಪಾರಿಯೊಬ್ಬರು ಈಡೇರಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ವಲಯದಲ್ಲಿ 17ನೇ ರ‍್ಯಾಂಕ್ ಪಡೆದು ಪಿಎಸ್ಐ ಆಗಿ ಆಯ್ಕೆಯಾಗಿರುವ ಫರೀದಾ ಬೇಗಂ ಇತರ ಯುವತಿಯರಿಗೆ ಸ್ಫೂರ್ತಿಯಾಗಿದ್ದಾಳೆ.