ಕೊರೊನಾ ನಿರ್ಮೂಲನೆಗಾಗಿ ಮರುಳಾರಾಧ್ಯ ಶ್ರೀಗಳ ಮೌನಾನುಷ್ಠಾನ - ಕೊರೊನಾ ವೈರಸ್
ಕೊರೊನಾ ನಿವಾರಣೆಗೆ ಪ್ರಾರ್ಥಿಸಿ, ಲೋಕಕಲ್ಯಾಣಾರ್ಥವಾಗಿ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮೌನಾನುಷ್ಠಾನ ಕುಳಿತಿದ್ದಾರೆ. ಏಪ್ರಿಲ್ 16 ರಿಂದ ಮೌನಾನುಷ್ಠಾನಕ್ಕೆ ಕುಳಿತಿರುವ ಶ್ರೀಗಳು 48 ದಿನಗಳ ಕಾಲ ಅನುಷ್ಠಾನ ನಡೆಸಲಿದ್ದಾರೆ. ಮಾಹಾಮಾರಿ ಕೋವಿಡ್-19 ನಿರ್ಮೂಲನೆಯಾಗಲಿ ಎಂದು ಈ ಮೂಲಕ ದೈವದ ಮೊರೆ ಹೋಗಿದ್ದಾರೆ.