ರಸ್ತೆ ಸಂಪರ್ಕ ಬಂದ್ ಮಾಡಿದ ಕೂಡಲ ಗ್ರಾಮಸ್ಥರು - ರಸ್ತೆ ಬಂದ್
ಹಾನಗಲ್: ಕೊರೊನಾ ವೈರಸ್ ಹರಡುವಿಕೆ ತಡೆಯಲು ಹಾನಗಲ್ ತಾಲೂಕಿನ ಕೂಡಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗ್ರಾಮಸ್ಥರೇ ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಗ್ರಾಮದಲ್ಲಿ ಇಲ್ಲಿಯವರೆಗೆ ಹೊರ ರಾಜ್ಯ ಅಥವಾ ಹೊರ ದೇಶಗಳಿಂದ ಯಾರೂ ಬಂದಿಲ್ಲ. ಇನ್ನು ಮುಂದೆಯೂ ಯಾವುದೇ ಜನರು ಬರದಂತೆ ಗ್ರಾಮದ ಯುವಕರು ನಿಗಾವಹಿಸಿದ್ದಾರೆ.