ಕೋಲಾರ: ರಸ್ತೆ ಅಗಲೀಕರಣ ಕಾಮಗಾರಿಗೆ ಬೃಹತ್ ಮರಗಳ ಮಾರಣಹೋಮ - road widening work effects on trees
ಕೋಲಾರ: ರಸ್ತೆ ಆಗಲೀಕರಣ ಹಿನ್ನೆಲೆಯಲ್ಲಿ ರಸ್ತೆಗಳ ಬದಿಯಲ್ಲಿದ್ದ ಬೃಹತ್ ಮರಗಳ ಮಾರಣಹೋಮ ನಡೆದಿದೆ. ಕೋಲಾರದ ಪ್ರಮುಖ ರಸ್ತೆಗಳಾದ ಮೆಕ್ಕೆ ವೃತ್ತ, ಬಂಗಾರಪೇಟೆ ರಸ್ತೆ, ಡೂಂಲೈಟ್ ಸರ್ಕಲ್ ಮತ್ತು ಟವರ್ ರಸ್ತೆ ಆಗಲೀಕರಣ ಮಾಡಲಾಗುತ್ತಿರುವ ಹಿನ್ನೆಲೆ, ಸುಮಾರು 30 ವರ್ಷಗಳಷ್ಟು ಹಿಂದಿನ ಬೃಹತ್ ಮರಗಳನ್ನು ಲೋಕೋಪಯೋಗಿ ಇಲಾಖೆ ತೆರವು ಮಾಡಿಸುತ್ತಿದೆ. ವಾಹನದ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಆಗಲೀಕರಣ ಕಾಮಗಾರಿಯನ್ನು ಇದೀಗ ಕೈಗೆತ್ತಿಕೊಳ್ಳಲಾಗುತ್ತಿದ್ದು, ರಸ್ತೆಗಳ ಬದಿಯಲ್ಲಿದ್ದ ಬೃಹತ್ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಇದನ್ನು ಪರಿಸರ ಪ್ರೇಮಿಗಳು ತೀವ್ರವಾಗಿ ವಿರೋಧಿಸಿದ್ದಾರೆ.