ಲಸಿಕೆ ಸಂಗ್ರಹಣೆಗೆ ಚಿತ್ರದುರ್ಗ ಜಿಲ್ಲಾಡಳಿತ ಸಿದ್ಧತೆ: 16 ಸಾವಿರ ಕೋವಿಡ್ ವಾರಿಯರ್ಸ್ಗೆ ವ್ಯಾಕ್ಸಿನ್ ನೀಡಲು ತಯಾರಿ - ಕೋವಿಡ್ ಲಸಿಕೆ ಸಂಗ್ರಹಣೆಗೆ ಕೊಲಾರ ಜಿಲ್ಲಾಡಳಿತ ಸಿದ್ಧತೆ
ಚಿತ್ರದುರ್ಗ: ಕೊರೊನಾ ವೈರಸ್ ಮಟ್ಟ ಹಾಕಲು, ಸಾರ್ವಜನಿಕರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೆಲವೇ ದಿನಗಳಲ್ಲಿ ಜಿಲ್ಲೆಗೆ ವ್ಯಾಕ್ಸಿನ್ ಬರಲಿದ್ದು, ಜಿಲ್ಲಾಡಳಿತ ವ್ಯಾಕ್ಸಿನ್ ಸಂಗ್ರಹಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲಾ ಆರೋಗ್ಯಧಿಕಾರಿಗಳ ಕಚೇರಿಯಲ್ಲಿರುವ ಲಸಿಕೆ ಉಗ್ರಾಣದಲ್ಲಿ ಲಸಿಕೆ ಸಂಗ್ರಹವಾಗಲಿದೆ. ಮೊದಲ ಹಂತವಾಗಿ ಕೊರೊನಾ ವಾರಿಯರ್ಸ್ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ವೈದ್ಯರು ಸೇರಿದಂತೆ ಹಲವರಿಗೆ ಮೊದಲ ಭಾಗವಾಗಿ ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೊದಲ ಹಂತವಾಗಿ ಹದಿನಾರು ಸಾವಿರಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗುವುದು ಎಂದು ಲಸಿಕಾ ಉಗ್ರಾಣ ಉಸ್ತುವಾರಿಯಾದ ಡಾ.ಕುಮಾರಸ್ವಾಮಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪ್ರತ್ಯಕ್ಷ ವರದಿ.