ಕೋಲಾರದಲ್ಲಿ ಡಿಸಿ ಸಿಟಿ ರೌಂಡ್ಸ್: ಪರವಾನಗಿ ಪಡೆಯದ ಅಂಗಡಿ ಮಾಲೀಕರ ವಿರುದ್ಧ ಗರಂ - ಬೆಳ್ಳಂಬೆಳಿಗ್ಗೆ ನಗರದಲ್ಲಿ ರೌಂಡ್ಸ್ ಹಾಕಿದ ಜಿಲ್ಲಾಧಿಕಾರಿ ಸತ್ಯಭಾಮ
ಕೋಲಾರ: ಇಂದು ಬೆಳ್ಳಂಬೆಳಗ್ಗೆ ನಗರದಲ್ಲಿ ರೌಂಡ್ಸ್ ಹಾಕಿದ ಜಿಲ್ಲಾಧಿಕಾರಿ ಸತ್ಯಭಾಮ, ಅಧಿಕಾರಿಗಳಿಗೆ ಹಾಗೂ ಪರವಾನಗಿ ಪಡೆಯದೇ ಅಂಗಡಿ ನಡೆಸುತ್ತಿದ್ದ ಮಾಲೀಕರ ವಿರುದ್ಧ ಗರಂ ಆಗಿದ್ದಾರೆ. ನಗರದ ಪ್ರಮುಖ ಭಾಗಗಳಿಗೆ ತೆರಳಿದ ಡಿಸಿ, ಅಂಗಡಿಗಳ ಬಳಿ ಸ್ವಚ್ಚತೆ ಇಲ್ಲದ ಕಾರಣ ಮಾಲೀಕರ ವಿರುದ್ದ ಹರಿಹಾಯ್ದರು. ಇನ್ನು ಪರವಾನಗಿ ಇಲ್ಲದೇ ಅಂಗಡಿಗಳನ್ನ ನಡೆಸುತ್ತಿದ್ದ ಮಾಲೀಕರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಈ ವೇಳೆ, ಅಂಗಡಿ ಮಾಲೀಕರು ಹಾಗೂ ಜಿಲ್ಲಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರವಾನಗಿ ಇಲ್ಲದಿರುವ ಅಂಗಡಿಗಳನ್ನು ಕೂಡಲೇ ಜಪ್ತಿ ಮಾಡುವಂತೆ, ಜೊತೆಗೆ ಅಂಗಡಿ ಮಾಲೀಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.