ಕರ್ನಾಟಕ

karnataka

ETV Bharat / videos

ಕೋಲಾರ ಡಿಸಿ ಸಿಟಿ ರೌಂಡ್ಸ್‌.. ರಸ್ತೆ ಅವ್ಯವಸ್ಥೆ, ಶುಚಿತ್ವದ ಸಮಸ್ಯೆಗಳ ಪರಿಶೀಲನೆ - Inspection of road mess, cleanliness issues

By

Published : Sep 28, 2019, 9:40 AM IST

ಕೋಲಾರ:ಜಿಲ್ಲಾಧಿಕಾರಿ ಮಂಜುನಾಥ್ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ,ರಸ್ತೆಗಳ ಅವ್ಯವಸ್ಥೆ ಹಾಗೂ ಶುಚಿತ್ವದ ಸಮಸ್ಯೆಗಳನ್ನ ಪರಿಶೀಲಿಸಿದ್ರು. ಕೋಲಾರ ನಗರ ಅಭಿವೃದ್ದಿಗಾಗಿ ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನ ಈಗಿನ ಸರ್ಕಾರ ತಡೆಹಿಡಿದಿದ್ದ ಹಿನ್ನಲೆ,ವಿವಿಧ ಪ್ರಗತಿಪರ ಸಂಘಟನೆಗಳಿಂದ ಕೋಲಾರ ಬಂದ್‍ಗೆ ಕರೆ ನೀಡಲಾಗಿತ್ತು. ಆದರೆ, ಶಾಸಕ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುದಾನವನ್ನ ಮರುಬಿಡುಗಡೆ ಮಾಡಿಸುವ ಭರವಸೆ ನೀಡಿದ ಹಿನ್ನಲೆ, ಬಂದ್ ಕೈಬಿಡಲಾಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ವಿವಿಧ ಸಂಘಟನೆಯವರು ನಗರದ ಶುಚಿತ್ವ ವೀಕ್ಷಿಸಿದ್ರು. ಇನ್ನು, ನಗರ ಸಂಚಾರ ನಡೆಸಿದ ಜಿಲ್ಲಾಧಿಕಾರಿ ಮಂಜುನಾಥ್, ರಸ್ತೆಗಳ ದುರಸ್ಥಿಯಾಗುವವರೆಗೂ ಹದಗೆಟ್ಟಿರುವ ರಸ್ತೆಗಳಿಗೆ ತೇಪೆ ಹಾಕುವಂತೆ ನಗರ ಸಭೆ ಹಾಗೂ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ರು.

ABOUT THE AUTHOR

...view details