ಸರ್ಕಾರ ಖಾಸಗಿ ಕಂಪನಿಗಳ ಏಜೆಂಟ್ ; ನಾಳೆ ರೈತರ ಆಕ್ರೋಶ ಸ್ಫೋಟ -ಕೋಡಿಹಳ್ಳಿ 'ಈ'ಸಂದರ್ಶನ! - karnataka bundh
ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮದು ರೈತ ಪರ ಸರ್ಕಾರ ಎಂದು ಹೇಳ್ತಾರೆ. ಆದರೆ, ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗೆ ಶಾಸನಸಭೆಯ ಅನುಮೋದನೆ ಪಡೆದಿದೆ. ಸರ್ಕಾರ ಖಾಸಗಿ ಕಂಪನಿಗಳ ಏಜೆಂಟ್ ರೀತಿ ವರ್ತನೆ ಮಾಡ್ತಿದೆ. ಹೀಗಾಗಿ, ನಾಳೆ ರೈತರ ಆಕ್ರೋಶದ ಕಟ್ಟೆ ಒಡೆಯಲಿದೆ ಅಂತಾ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ನಾಳಿನ ಬಂದ್ ಹಿನ್ನೆಲೆ ಈಟಿವಿ ಭಾರತ್‌ಗೆ ಅವರು ಸಂದರ್ಶನ ನೀಡಿದ್ದಾರೆ.