ಕೊಡಗು SP ಕನ್ನಡ ಅಭಿಮಾನ : ಮಗಳನ್ನ ಅಂಗನವಾಡಿಗೆ ಸೇರಿಸಿ ಮಾದರಿಯಾದ ಡಾ.ಸುಮನ್ ಡಿ ಪನ್ನೇಕರ್ - ಅಂಗನವಾಡಿ ಕೇಂದ್ರ
ಕೊಡಗು : ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳುಹಿಸುವ ಮೂಲಕ ಕೊಡಗು ಎಸ್ಪಿ ಇತರ ಅಧಿಕಾರಿಗಳಿಗೂ ಮಾದರಿಯಾಗಿದ್ದಾರೆ. ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ಮಗಳು ಖುಷಿಯನ್ನು ಕನ್ನಡ ಕಲಿಕೆಗೆ ಒತ್ತು ನೀಡುವ ಹಾಗೂ ಗ್ರಾಮೀಣ ಮಕ್ಕಳೊಂದಿಗೆ ಬೆರೆಯುವ ಉದ್ದೇಶದಿಂದ ಮಡಿಕೇರಿ ನಗರದ ಎಫ್‌ಎಂಸಿ ಕಾಲೇಜು ಹಿಂಭಾಗದ ಅಂಗನವಾಡಿ ಕೇಂದ್ರಕ್ಕೆ ಸೇರಿಸಿದ್ದಾರೆ. ನಿತ್ಯವೂ ಮಗುವನ್ನು ಅಂಗನವಾಡಿಗೆ ಡ್ರಾಪ್ ಮಾಡಿ ಕರ್ತವ್ಯಕ್ಕೆ ತೆರಳುತ್ತಾರೆ. ಹಾಗೆಯೇ ಮಗು ಕಲಿಕೆ, ಆಟ, ಊಟ ಜೊತೆಗೆ ಮಕ್ಕಳೊಂದಿಗೆ ಬೆರೆಯುತ್ತಿದ್ದು, ಸಾಮಾನ್ಯರ ಮಕ್ಕಳಂತೆ ಸರ್ಕಾರಿ ಅಂಗನವಾಡಿಗೆ ಕಳುಹಿಸುತ್ತಿರುವ ಎಸ್ಪಿ ಅವರ ಬದ್ಧತೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.