ಸಂತ್ರಸ್ತರಿಗೆ ಸರ್ಕಾರ ಕೊಟ್ಟಿದ್ದ ಬಾಡಿಗೆ ಹಣವನ್ನೂ ಬಿಡ್ಲಿಲ್ಲ: ಬೆದರಿಸಿ ಹಣ ಲಪಟಾಯಿಸಿದನಾ ನಗರಸಭೆ ನೌಕರ? - ಬಾಡಿಗೆ ಹಣವನ್ನೂ ಬಿಟ್ಟಿಲ್ವಂತೆ ನಗರಸಭೆ ನೌಕರ
ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಈ ಹಿಂದೆ ಸಂಭವಿಸಿದ ನೆರೆ ಹಾಗೂ ಭೂ ಕುಸಿತ ಅಲ್ಲಿನ ಜನ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿತ್ತು. ರಾಜ್ಯ ಸರ್ಕಾರ ಕೂಡಾ ನೊಂದವರ ಕಣ್ಣೀರು ಒರೆಸೋದಕ್ಕಾಗಿ ಒಂದಷ್ಟು ಪರಿಹಾರ ಕೂಡಾ ನೀಡಿತ್ತು. ಆದರೆ ನಗರಸಭೆ ಸಿಬ್ಬಂದಿಯೊಬ್ಬನ ಚೆಲ್ಲಾಟದಿಂದ ಕುಟುಂಬವೊಂದಕ್ಕೆ ಇನ್ನೂ ನೆರೆ ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ.