ಸೂರ್ಯೋದಯ ವೇಳೆ ಜಿನ್ನೇನಹಳ್ಳಿ ಬೆಟ್ಟದಲ್ಲಿ ಗಜಪಡೆಯ ಪಯಣ.. ವಿಡಿಯೋ - ಕೊಡಗು ಲೆಟೆಸ್ಟ್ ನ್ಯೂಸ್
ಕೊಡಗು/ ಹೆಬ್ಬಾಲೆ: ಪ್ರಕೃತಿಯ ಸುಂದರ ಮಡಿಲಿನಲ್ಲಿ ಗಜಪಡೆಯ ಗುಂಪೊಂದು ಬೆಟ್ಟವನ್ನೇರಿ ಸೂರ್ಯನನ್ನು ಸ್ವಾಗತಿಸುತ್ತಿರುವಂತೆ ಭಾಸವಾಗಿರುವ ಸುಂದರ ದೃಶ್ಯ ಕುಶಾಲನಗರದ ಹಬ್ಬಾಲೆ ಸಮೀಪದ ಜಿನ್ನೇನಹಳ್ಳಿ ಬೆಟ್ಟದಲ್ಲಿ ಕಂಡು ಬಂದಿದೆ. ಇಂದು ಸೂರ್ಯೋದಯದ ವೇಳೆ ಬೆಟ್ಟವನ್ನು ಹತ್ತಿರುವ ಗಜಪಡೆ, ಸಾಲಿನಲ್ಲಿ ತಮ್ಮ ಪಯಣ ಬೆಳೆಸಿದ್ದವು. ಆನೆಗಳ ಪಯಣದ ದೃಶ್ಯ ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಂಭ್ರಮಿಸಿದ್ದಾರೆ.