ಶಾಲೆಯತ್ತ ಸುಳಿಯದೇ ಶಿಕ್ಷಣ ವಂಚಿತರಾದ ಮಕ್ಕಳಿಗೀಗ ಹೊಸ ಬೆಳಕು! - ಕೊಡಗು ಮಡಿಕೇರಿ ಶಿಕ್ಷಣ ಇಲಾಖೆ ಸುದ್ದಿ
ಬದುಕು ಒಂದು ಹೊತ್ತಿನ ಊಟಕ್ಕಾಗಿ ನಟಿಸುವ ನಾಟಕ ರಂಗದಂತಾಗಿದೆ. ಕೆಲಸಕ್ಕಾಗಿ ಅಲೆಮಾರಿಗಳಾಗಿರುವ ಜನ, ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಇತ್ತ ರಾಜ್ಯ ಸರ್ಕಾರ ಉಚಿತ ಸಮವಸ್ತ್ರ ಸೇರಿ ಬಿಸಿಯೂಟ ನೀಡಿದ್ರೂ ಕೊಡಗು ಜಿಲ್ಲೆಯಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಅಂತಹ ಮಕ್ಕಳನ್ನು ಗುರುತಿಸಿ ಈಗ ಮುಖ್ಯವಾಹಿನಿಗೆ ತರಲಾಗಿದೆ.