ಮುಳ್ಳಿನ ರಾಶಿ ಮೇಲೆ ಜಿಗಿದು ಭಕ್ತಿಯ ಪರಾಕಾಷ್ಠೆ ಮೆರೆದ ಜನರು
ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ತನೂರು ಗ್ರಾಮದ ಆಂಜನೇಯ ಸ್ವಾಮಿ ಜಾತ್ರೆಯ ಪ್ರಯುಕ್ತ ಬ್ಯಾಟಿ ಮುಳ್ಳಿನ ರಾಶಿಯ ಮೇಲೆ ಬಿದ್ದು ಭಕ್ತಿಯ ಪರಾಕಾಷ್ಠೆ ಮೆರೆದರು. ಊರಿನ ಹೊರಭಾಗದಲ್ಲಿ ಬ್ಯಾಟಿಗಿಡಕ್ಕೆ ಪೂಜೆ ಸಲ್ಲಿಸಿ, ತರಲಾಯಿತು. ಬಳಿಕ ಒಂದು ಕಡೆ ಆ ಮುಳ್ಳಿನ ಗಿಡಗಳನ್ನು ರಾಶಿ ಮಾಡಿ, ಅದರ ಮೇಲೆ ಬಿದ್ದು ಆಂಜನೇಯನಿಗೆ ಭಕ್ತಿ ಸಮರ್ಪಿಸಿದರು. ಹಿಂದಿನಿಂದಲೂ ಯುಗಾದಿ ಸಂದರ್ಭದಲ್ಲಿ ಈ ಆಚರಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ.