ಕೋವಿಡ್ ನಿಯಂತ್ರಣಕ್ಕೆ ಮಣ್ಣಿನ ಗುಡ್ಡೆ ಹಾಕಿ ರಸ್ತೆ ಬಂದ್..
ಕೊರೊನಾ ಉಲ್ಬಣಗೊಂಡಿರುವ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಅಧಿಕಾರಿಗಳು ಬಿಗಿ ಕ್ರಮ ಕೈಗೊಂಡಿದ್ದಾರೆ. ಅಧಿಕಾರಿಗಳು ಗ್ರಾಮದ ಸುತ್ತ-ಮುತ್ತಲಿನ ರಸ್ತೆಗಳ ಮೇಲೆ ಮಣ್ಣಿನ ಗುಡ್ಡೆ ಹಾಕಿ ಬಂದ್ ಮಾಡಿದ್ದಾರೆ. ಕಿನ್ನಾಳ ಗ್ರಾಮದಲ್ಲಿ 80 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಸೋಂಕು ಹರಡುವಿಕೆ ನಿಯಂತ್ರಿಸಲು ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರು 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಜನರ ಓಡಾಟ, ವಾಹನಗಳ ಓಡಾಟ ಹಾಗೂ ಬೇರೆ ಗ್ರಾಮಗಳಿಂದ ಜನರು ಬರದಂತೆ ಗ್ರಾಮದ ಸುತ್ತ-ಮುತ್ತಲಿನ ರಸ್ತೆಗಳು ಸೇರಿ ಪ್ರಮುಖ ರಸ್ತೆಗಳಲ್ಲಿ ಮಣ್ಣಿನ ಗುಡ್ಡೆ ಹಾಕಿ ಬಂದ್ ಮಾಡಿದ್ದಾರೆ.
Last Updated : Apr 27, 2021, 1:38 PM IST