ನಾಡಿಗೆ ಬಂದ ಕಾಳಿಂಗ ಸರ್ಪ ಮರಳಿ ಕಾಡಿಗೆ..! ವಿಡಿಯೋ - ಸಿದ್ದಾಪುರ ತಾಲೂಕಿನಲ್ಲಿ ಸರ್ಪ ರಕ್ಷಣೆ
ಶಿರಸಿ: ಮನೆ ಬಾಗಿಲಿಗೆ ಆಹಾರ ಅರಸಿ ಬಂದಿದ್ದ ಕಾಳಿಂಗ ಸರ್ಪವೊಂದನ್ನ ರಕ್ಷಣೆ ಮಾಡಲಾಗಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿಯ ಜಯರಾಮ ಎಂ. ನಾಯ್ಕರವರ ಮನೆಗೆ ಬಂದಿದ್ದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನ ಹಿಡಿದು ಕಾಡಿಗೆ ಬಿಡಲಾಯಿತು. ಕಾಳಿಂಗ ಸರ್ಪ ಬಂದಿರುವ ವಿಚಾರವನ್ನು ಮನೆಯವರು ಅರಣ್ಯ ಇಲಾಖೆಗೆ ತಿಳಿಸಿದ್ದು, ಅರಣ್ಯ ಇಲಾಖೆ ಆರ್.ಡಿ.ಎಫ್.ಓ ಮಂಜುನಾಥ್, ಶಿರಸಿಯ ಉರಗ ತಜ್ಞ ಮನೋಹರ್ ಆಗಮಿಸಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.