ಮನೆಯ ಬಾತ್ ರೂಮ್ನಲ್ಲಿ ಅಡಗಿ ಕೂತಿದ್ದ ಕಾಳಿಂಗ:ವಿಡಿಯೋ ನೋಡಿ - ಬಚ್ಚಲು ಮನೆಯಲ್ಲಿ ಕುಳಿತಿದ್ದ ಕಾಳಿಂಗ ಸರ್ಪ ಸೆರೆ ಸುದ್ದಿ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮನೆಯೊಂದರ ಬಾತ್ ರೂಮ್ನಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಅವಿತು ಕೂತಿದ್ದನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ. ಬಾತ್ ರೂಮ್ನಲ್ಲಿ ಕತ್ತಲೆ ಇದ್ದು, ಲೈಟ್ ಕೂಡ ಹಾಕಿರಲಿಲ್ಲ. ಹಾಗಾಗಿ ಕಾಳಿಂಗ ಸರ್ಪ ಕಂಡಿಲ್ಲ. ಆದರೆ ಹಾವು ಬುಸುಗುಟ್ಟುವ ಶಬ್ದ ಕೇಳಿ ಅತ್ತ ಬೆಳಕು ಹಾಯಿಸಿದ್ದಾರೆ. ಈ ವೇಳೆ ಕಾಳಿಂಗ ಸರ್ಪ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆಯವರು ಉರಗ ತಜ್ಞ ಅಜಯ್ ಗಿರಿಯವರನ್ನ ಸ್ಥಳಕ್ಕೆ ಕಳಿಸಿದ್ದು, ಗಿರಿಯವರು ತುಂಬಾ ನಾಜೂಕಾಗಿ ಈ ಹಾವನ್ನು ಸೆರೆ ಹಿಡಿದಿದ್ದಾರೆ. ಸುಮಾರು ಎಂಟು ಅಡಿ ಉದ್ದವಿದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.