ಕೋಳಿಗಾಗಿ ಹೊಂಚು ಹಾಕಿದ್ದ ನಾಗಪ್ಪ ಸೆರೆ - ಕಾರವಾರ ತಾಲೂಕಿನ ಹಳಗಾ ಗ್ರಾಮ
🎬 Watch Now: Feature Video
ಕಾರವಾರ (ಉತ್ತರಕನ್ನಡ): ತಾಲೂಕಿನ ಹಳಗಾ ಗ್ರಾಮದ ಮನೆಯೊಂದರ ಕೋಳಿ ಗೂಡಿಗೆ ನುಗ್ಗಿದ್ದ ನಾಗರ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ಹಳಗಾ ಗ್ರಾಮದ ಕೃಷ್ಣ ಗುನಗಿ ಎಂಬುವರ ಮನೆಯಲ್ಲಿ ನಾಗರ ಹಾವೊಂದು ಕೋಳಿ ಮರಿಗಾಗಿ ಹೊಂಚು ಹಾಕುತ್ತಿತ್ತು. ಇದನ್ನು ಗಮನಿಸಿದ ಮನೆಯ ಸದಸ್ಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಿಮಿಸಿದ ಸಿಬ್ಬಂದಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.