ಕೆಂಪೇಗೌಡ ದಿನಾಚರಣೆಗೆ ಕಾರ್ಪೊರೇಟರ್ಸ್ ಭರ್ಜರಿ ಸಿದ್ಧತೆ.. ಹಾಡಿದರು, ರಂಗೋಲಿ ಹಾಕಿದರು.. - ಕೆಂಪೇಗೌಡ ಪ್ರಶಸ್ತಿ ಪ್ರಧಾನ
ಬೆಂಗಳೂರು:ಕೆಂಪೇಗೌಡ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಬಿಬಿಎಂಪಿ ಕಳೆಗಟ್ಟಲಿದೆ. ಈ ಹಿನ್ನೆಲೆ ಪಾಲಿಕೆ ಸದಸ್ಯರೂ ಸಿದ್ಧವಾಗ್ತಿದ್ದು, ನಾಳೆಯ ಕಾರ್ಯಕ್ರಮಕ್ಕೆ ಹಾಡು ಹಾಡುವುದನ್ನ ಪ್ರಾಕ್ಟೀಸ್ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಅಷ್ಟೇ ಅಲ್ಲ, ರಂಗೋಲಿ ಸ್ಪರ್ಧೆ ಇರುವುದರಿಂದ ಪಾಲಿಕೆ ಮಹಿಳಾ ಸದಸ್ಯರು ಬಣ್ಣ ಬಣ್ಣದ ರಂಗೋಲಿ ಹಾಕಿದರು. ಪಾಲಿಕೆ ಅಧಿಕಾರಿ, ನೌಕರರಿಗೆ, ಚಿತ್ರಕಲೆ ಸ್ಪರ್ಧೆಯನ್ನೂ ಆಯೋಜಿಸಿದ್ದರು. ಬಿಬಿಎಂಪಿ ಕೇಂದ್ರ ಕಚೇರಿಯನ್ನೂ ಕೂಡಾ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ.