'ಕಟೀಲು'ಮಾತೆಯ'ಯಕ್ಷ' ಅವಧೂತರಿಂದ ಜೈತ್ರಯಾತ್ರೆ.. - ದಕ್ಷಿಣ ಕನ್ನಡ ಜಿಲ್ಲೆ ಕಟೀಲು ಯಕ್ಷಗಾನ ಮೇಳ ಚೈತ್ರಯಾತ್ರೆ ಪ್ರಾರಂಭ ಸುದ್ದಿ
ಕರಾವಳಿಯ ಜನಪ್ರಿಯ ಜನಪದ ಕಲೆ ಯಕ್ಷಗಾನದ ತವರೂರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವಾರು ಯಕ್ಷಗಾನ ಮೇಳಗಳಿವೆ. ಆದರೆ, ಕಟೀಲು ಮೇಳಕ್ಕೆ ವಿಶೇಷ ಪ್ರಾಧಾನ್ಯತೆಯಿದೆ. ಭಕ್ತಾದಿಗಳು ದೇವಿಯ ಪ್ರೀತ್ಯರ್ಥವಾಗಿ ನೀಡುವ ಅತೀ ದೊಡ್ಡ ಹರಕೆಯೆಂದರೆ ಯಕ್ಷಗಾನ ಸೇವೆ. ಈ ಮೂಲಕ ಭಕ್ತರ ಅದೆಷ್ಟೋ ಸಂಕಷ್ಟಗಳು ನಿವಾರಣೆಯಾದ ನಿದರ್ಶನಗಳೂ ಇವೆ. ಇದು ಕಟೀಲು ಮಾತೆಯ ಪವಾಡವೆಂದೇ ಜನ ನಂಬುತ್ತಾರೆ..