ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಂದಿದೆ 40 ಗಿಡಮೂಲಿಕೆಗಳ ಕಷಾಯಪುಡಿ
ಮೈಸೂರು: ಕೊರೊನಾ ಸೋಂಕು ಎಲ್ಲಾ ಕಡೆ ಹರಡಿದ್ದು, ಇದನ್ನು ತಡೆಗಟ್ಟಲು ಸಹಕಾರಿಯಾಗುವ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಈಗ ಸಾಂಸ್ಕೃತಿಕ ನಗರಿಯಲ್ಲಿ ಪ್ರಸಿದ್ಧಿಯಾಗಿದೆ. ನಗರದ ವಿದ್ಯಾರಣ್ಯಪುರಂ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ವಿಜಯಲಕ್ಷ್ಮಿ ಫುಡ್ ಪ್ರಾಡಕ್ಟ್ ಮಾಲೀಕರಾದ ರಂಗನಾಥ್, 40 ಗಿಡಮೂಲಿಕೆಗಳಿರುವ ಕಷಾಯದ ಪುಡಿ ತಯಾರಿಸಿದ್ದಾರೆ. ಇದು ಕೊರೊನಾದಿಂದ ಬಳಲುತ್ತಿರುವವರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಇದನ್ನು ತಯಾರಿಸಲು 40 ತರಹದ ಪದಾರ್ಥಗಳನ್ನು ಬಳಸಲಾಗಿದೆ. ಮುಖ್ಯವಾಗಿ ಅರಿಶಿನ, ಜೀರಿಗೆ, ತುಳಸಿ, ಅಮೃತಬಳ್ಳಿ, ಏಲಕ್ಕಿ, ಶುಂಠಿ, ಸೊಗದೆ ಬೇರುಗಳನ್ನು ಇದರಲ್ಲಿ ಸೇರಿಸಲಾಗಿದೆ. ಒಂದು ಲೋಟ ಹಾಲು, ನೀರು ಅಥವಾ ಚಹಾ ಜೊತೆಗೆ ಕಷಾಯದ ಪುಡಿ ಹಾಕಿ ಸಕ್ಕರೆ ಅಥವಾ ಬೆಲ್ಲ ಬೆರೆಸಿ ಕುಡಿಯಬಹುದು. ಇಲ್ಲದಿದ್ದರೆ ಜೇನು ತುಪ್ಪದಲ್ಲೂ ಬಳಸಬಹುದು ಎನ್ನುತ್ತಾರೆ ಮಾಲೀಕ ರಂಗನಾಥ್.