ಕರ್ನಾಟಕ

karnataka

ETV Bharat / videos

ವಿಜಯನಗರ ಜಿಲ್ಲೆ ರಚನೆಗೆ ಕರುಣಾಕರ ರೆಡ್ಡಿಯಿಂದಲೂ ಅಪಸ್ವರ... ಪ್ರತಿಭಟನೆಗೂ ಜೈ ಎಂದ ಶಾಸಕ - Bellary district news

By

Published : Sep 29, 2019, 5:34 PM IST

ಬಳ್ಳಾರಿ ಜಿಲ್ಲೆಯ ವಿಭಜನೆಗೆ ಮುಂದಾಗಿರುವ ಸಿಎಂ ಯಡಿಯೂರಪ್ಪ ಅವರಿಗೆ ಅವರದ್ದೇ ಪಕ್ಷದ ಶಾಸಕರಿಂದ ವಿರೋಧ ವ್ಯಕ್ತವಾಗಿದೆ. ವಿಜಯನಗರ ನೂತನ ಜಿಲ್ಲೆ ರಚನೆ ಕುರಿತು ಪ್ರತಿಕ್ರಿಯೆ ನೀಡಿದ ಹರಪನಹಳ್ಳಿ ಶಾಸಕ ಕರುಣಾಕರ್​ ರೆಡ್ಡಿ ಅವರು, ಸಿಎಂ ತರಾತುರಿಯಲ್ಲಿ ಬಳ್ಳಾರಿ ಜಿಲ್ಲೆ ವಿಭಜನೆಗೆ ಮುಂದಾಗಿದ್ದಾರೆ. ಯಡಿಯೂರಪ್ಪ ಸಿಎಂ ಆಗಬೇಕು ಅಂತಾ ನಾನು ಬೆಂಬಲಿಸಿದ್ದೆ. ಸಿಎಂ ಕರೆದು ಮಾತನಾಡಿದರೆ, ನಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ. ಅಲ್ಲದೆ ಬಳ್ಳಾರಿ ವಿಭಜನೆ ವಿರೋಧಿಸಿ ಎಲ್ಲೇ ಪ್ರತಿಭಟನೆ ನಡೆದರೂ ಅದಕ್ಕೆ ಬೆಂಬಲವಿದೆ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details