ಕಾಮಗಾರಿ ಮುಗಿಯದಿದ್ದರೂ ಟೋಲ್ ಸಂಗ್ರಹ: ಕರವೇಯಿಂದ ರಸ್ತೆ ತಡೆದು ಪ್ರತಿಭಟನೆ - ಚಿಕ್ಕೇರೂರು ಮತ್ತು ಹಂಸಭಾವಿ ರಸ್ತೆ
ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಮತ್ತು ಹಂಸಭಾವಿ ನಡುವಿನ ರಸ್ತೆ ಕಾಮಗಾರಿ ಇನ್ನು ಮುಕ್ತಾಯವಾಗಿಲ್ಲ. ಆದರೂ ಸಹ ಟೋಲ್ ಸಂಗ್ರಹ ಆರಂಭ ಮಾಡಲಾಗಿದೆ ಎಂದು ಆರೋಪಿಸಿ ಕರವೇ ಪ್ರತಿಭಟನೆ ನಡೆಸಿತು. ಟೋಲ್ ಮುಂದೆ ರಸ್ತೆ ತಡೆ ನಡೆಸಿದ ಕರವೇ ಕಾರ್ಯಕರ್ತರು ಕೆಐಡಿಸಿಎಲ್ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೊ ಟೋಲ್ ಸಂಗ್ರಹಿಸಬಾರದು. ತಪ್ಪಿದಲ್ಲಿ ಕರವೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.