ಉಮೇಶ್ ಕತ್ತಿಗೆ ಮಂತ್ರಿಸ್ಥಾನ ಕೊಡಬೇಡಿ...ಕರ್ನಾಟಕ ಕಾವಲು ಪಡೆಯಿಂದ ಸಿಎಂಗೆ ಮನವಿ - ಮೈಸೂರು ಸುದ್ದಿ
ಮೈಸೂರು: ಕರ್ನಾಟಕ ರಾಜ್ಯವನ್ನು ಇಬ್ಭಾಗ ಮಾಡುವಂತಹ ಹೇಳಿಕೆ ನೀಡಿದ ಶಾಸಕ ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಕರ್ನಾಟಕ ರಾಜ್ಯವನ್ನ ಇಬ್ಭಾಗ ಮಾಡುವಂತಹ ಹೇಳಿಕೆಯನ್ನು ಈ ಹಿಂದೆ ನೀಡಿರುವ ಶಾಸಕ ಉಮೇಶ್ ಕತ್ತಿಯವರಿಗೆ ಯಾವ ಕಾರಣಕ್ಕೂ ಮಂತ್ರಿ ಸ್ಥಾನ ನೀಡಬಾರದು. ಇಂತಹವರನ್ನು ಮಂತ್ರಿ ಮಾಡಿದರೆ ರಾಜ್ಯ ಇಬ್ಭಾಗವಾಗುತ್ತದೆ. ಯಾವ ಕಾರಣಕ್ಕೂ ಮಂತ್ರಿ ಸ್ಥಾನ ನೀಡಬಾರದು ಎಂದು ಕಳಕಳಿಯ ಮನವಿ ಮಾಡುತ್ತೇನೆ ಎಂದು ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್ಕುಮಾರ್ ಗೌಡ ವಿಡಿಯೋ ಮಾಡಿ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ್ದಾರೆ.
Last Updated : Feb 3, 2020, 7:45 PM IST