ಕರ್ನಾಟಕ ಬಂದ್: ನಾಳೆ ರಸ್ತೆಗಿಳಿಯುವುದಿಲ್ಲ ಓಲಾ- ಉಬರ್ - ಓಲಾ- ಉಬರ್ ಟ್ಯಾಕ್ಸಿ ಕರ್ನಾಟಕ ಬಂದ್
ಬೆಂಗಳೂರು: ಕರ್ನಾಟಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್ಗೆ ಓಲಾ- ಉಬರ್ ಟ್ಯಾಕ್ಸಿಯಿಂದ ಸಂಪೂರ್ಣ ಬೆಂಬಲ ದೊರೆತಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರು ಮತ್ತು ಟ್ಯಾಕ್ಸಿ ಹಾಗೂ ಆಟೋಗಳ ಸಂಚಾರ ಬಂದ್ ಆಗಲಿದೆ. ಸಾರ್ವಜನಿಕರು ಸಹ ಈ ಪ್ರತಿಭಟನೆಗೆ ಬೆಂಬಲಿಸಿ ಎಂದು ಓಲಾ ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮನವಿ ಮಾಡಿದ್ದಾರೆ.