ಕರ್ನಾಟಕ ಬಂದ್: ಸಿಲಿಕಾನ್ ಸಿಟಿಯಲ್ಲಿ ಸಾರಿಗೆ ಸಂಚಾರ, ಜನ ಜೀವನ ಯಥಾಸ್ಥಿತಿ - ಕರ್ನಾಟಕ ಬಂದ್ ಹಿನ್ನೆಲೆ
ಬೆಂಗಳೂರು: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಬಂದ್ಗೆ ಅನೇಕ ಸಂಘಟನೆಗಳು ಕೈಜೋಡಿಸಿದ್ದರೂ ಸಹ ಈ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿಲ್ಲ. ಯಶವಂತಪುರ, ಮತ್ತಿಕೆರೆ ಹಾಗೂ ನಗರದ ಬಹುತೇಕ ಕಡೆ ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟುಗಳು, ಹೋಟೆಲ್, ಮೆಡಿಕಲ್ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಈ ಕುರಿತಂತೆ ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.