ಕರ್ನಾಟಕ ಬಂದ್.. ಬಿಬಿಎಂಪಿ ಕಚೇರಿ ಮುಂಭಾಗ ಪೊಲೀಸರ ಸರ್ಪಗಾವಲು
ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ಕೊಟ್ಟಿರುವ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಿಬಿಎಂಪಿ ಕಚೇರಿ ಮುಂಭಾಗದ ಕೆಎಸ್ಆರ್ಪಿ ತಂಡ ಸೇರಿ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿದೆ. ಇದಲ್ಲದೆ ನಗರದಲ್ಲಿ ಬಂದ್ ನಡೆಸಲು ಕೋಲಾರ, ಚಿಂತಾಮಣಿ, ಹೊಸಕೋಟೆಯಿಂದ ಆಗಮಿಸಲಿರುವ ರೈತರನ್ನು ಅಲ್ಲಿಯೇ ತಡೆಯಲು ಪೊಲೀಸರು ಸಜ್ಜಾಗಿದ್ದಾರೆ. ಕೆ ಆರ್ ಪೇಟೆ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇಲ್ಲಿ ಜನಸಂದಣಿ ಕಂಡು ಬಂದಿದೆ.