ಕರ್ನಾಟಕ

karnataka

ETV Bharat / videos

22 ಬಡ ರೋಗಿಗಳ ದೃಷ್ಟಿ ಕಸಿದುಕೊಂಡ ವಿಂಟೋ; ಆಸ್ಪತ್ರೆ ವಿರುದ್ಧ ಕರವೇ ಪ್ರತಿಭಟನೆ - ವಿಜಯಪುರದಲ್ಲಿ ಕರವೇ ಪ್ರತಿಭಟನೆ

By

Published : Nov 6, 2019, 11:00 AM IST

22 ಜನ ಬಡ ರೋಗಗಳನ್ನ ಶಾಶ್ವತವಾಗಿ ಕುರುಡರನ್ನಾಗಿಸಿದ ಬೆಂಗಳೂರಿನ ವಿಂಟೋ ಕಣ್ಣಿನ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರವೇ ಕಾರ್ಯಕರ್ತರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ಜುಲೈ ತಿಂಗಳಲ್ಲಿ 22 ಬಡ ರೋಗಿಗಳು ಕಣ್ಣಿನ ಪೊರೆ ತಗೆಯುವ ಚಿಕಿತ್ಸೆಯನ್ನು ಬೆಂಗಳೂರಿನ ವಿಂಟೋ ಆಸ್ಪತ್ರೆಯಲ್ಲಿ ಮಾಡಿಸಿಕೊಂಡಿದರು‌. ವೈದ್ಯರ ನಿರ್ಲಕ್ಷ್ಯದಿಂದ‌ ಇವರು ಇದೀಗ ಕಣ್ಣು ಕಳೆದುಕೊಳ್ಳುವಂತಾಗಿದೆ. ನಿರ್ಲಕ್ಷ್ಯವಹಿಸಿದ ವೈದ್ಯನ ವಿರುದ್ಧವೂ ಪ್ರತಿಭಟನಾ ನಿರತ ಕಾರ್ಯಕರ್ತರು ಕಿಡಿಕಾರಿದರು. ಕಣ್ಣು ಕಳೆದುಕೊಂಡವರಿಗೆ 10 ಲಕ್ಷ ಪರಿಹಾರವನ್ನು ವಿಂಟೋ ಆಸ್ಪತ್ರೆ ಆಡಳಿತ ಮಂಡಳಿ ನೀಡಬೇಕು ಮತ್ತು ಈ‌ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಗೆ ಒಳಪಡಿಸಿ ವಿಂಟೋ ಆಸ್ಪತ್ರೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ನಮ್ಮ ಹೋರಾಟ ಈ ಭೀಕರ ಘಟನೆಗೆ ಕಾರಣವಾದವರ ವಿರುದ್ಧ ಮಾತ್ರ, ಇಡಿ ವೈದ್ಯ ಕುಲದ ಮೇಲೆಲ್ಲ ಎಂದು ಕಾರ್ಯಕರ್ತರು ಸ್ಪಷ್ಟಪಡಿಸಿದರು.

ABOUT THE AUTHOR

...view details