ಇದು ಅಚ್ಚರಿ.. ಆಳ ಸಮುದ್ರದಲ್ಲಿ ನೀರು-ಮೋಡ ಮಿಲನ.. ವಿಡಿಯೋ ವೈರಲ್ - ಕಾರವಾರ ಸಮುದ್ರ ವಿಡಿಯೋ ವೈರಲ್
ಕಾರವಾರ: ಆಳಸಮುದ್ರದಲ್ಲಿ ಕಾಣಿಸಿಕೊಂಡಿದ್ದ ಸುಳಿಗಾಳಿಯು ಮೋಡದೊಂದಿಗೆ ಬೆಸೆದಿರುವ ಅದ್ಬುತ ದೃಶ್ಯವೊಂದು ಮೀನುಗಾರರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಆಳ ಸಮುದ್ರದಲ್ಲಿ ಸುಳಿಗಾಳಿಗೆ ಸಿಕ್ಕಿ ನೀರು ಆಕಾಶದೆತ್ತರಕ್ಕೆ ಹಾರುವಂತೆ ಕಂಡು ಬರುತ್ತಿದ್ದು, ಆಕಾಶದಿಂದ ಮೋಡ ಕೂಡ ಇದೇ ನೀರಿನೊಂದಿಗೆ ಬೆಸೆದು ನೀರು ಮೋಡ ಒಂದಾದ ರೀತಿಯ ಅಪರೂಪದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ, ಇದು ಕಾರವಾರ ಬಳಿ ಅರಬ್ಬಿ ಸಮುದ್ರದಲ್ಲಿ ನಡೆದಿದೆ ಎನ್ನಲಾಗುತ್ತಿದೆಯಾದರೂ ಎಲ್ಲಿ ಸೆರೆಹಿಡಿದ ದೃಶ್ಯ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.