ಕರಾಟೆಯಲ್ಲಿ ಲಿಮ್ಕಾ ದಾಖಲೆ ಬರೆಯಲು ಎಸ್.ಮಹದೇವ್ರಿಂದ ತಾಲೀಮು! - ಹಾಸನ ಸುದ್ದಿ
ಹಾಸನ: ನಗರದ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಲಿಮ್ಕಾ ದಾಖಲೆ ಮಾಡಲು ಮುಂದಾಗಿರುವ ಎಸ್.ಮಹದೇವ ತಯಾರಿ ಪ್ರದರ್ಶನ ನೀಡಿ ಗಮನಸೆಳೆದರು. ಇವರಿಗೆ ಕರಾಟೆ ಕೋಚ್ ಆಗಿರುವ ಜೆ.ಐ.ನಿರಂಜನ್ ರಾಜ್ ಮಾತನಾಡಿ, ಬ್ಲಾಕ್ ಬೆಲ್ಟ್ ಪಡೆದಿರುವ ಮಹದೇವ ಅವರು ಕರಾಟೆ ಕ್ರೀಡೆಯಲ್ಲಿ ಲಿಮ್ಕಾ ದಾಖಲೆ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಹಾಸನಾಂಬೆ ಕಲಾಕ್ಷೇತ್ರದಲಿ ಪೂರ್ವ ಸಿದ್ಧತೆಯ ಪ್ರದರ್ಶನ ನೀಡಲಾಗುತ್ತಿದೆ ಎಂದರು. ಕರಾಟೆ ತರಬೇತಿ ಪಡೆಯುತ್ತಿರುವ ಮಕ್ಕಳು ಕೂಡ ಪೂರ್ವ ಸಿದ್ಧತೆಯಲ್ಲಿ ಭಾಗವಹಿಸಿದ್ದು, ಇವರು ಕೂಡ ವಿಶೇಷ ಪ್ರದರ್ಶನ ನೀಡುತ್ತಿದ್ದಾರೆ.