ಮಹಾಮಾರಿ ಭೀತಿ ನಡುವೆ ಕಾರ ಹುಣ್ಣಿಮೆ ಆಚರಣೆ: ಮುತ್ತೈದೆಯರಿಂದ 'ಪತಿ' ಆಯಸ್ಸಿಗೆ ವಿಶೇಷ ಪ್ರಾರ್ಥನೆ ! - ಗಂಡನ ಆಯಸ್ಸು ವೃದ್ಧಿಯಾಗುವಂತೆ ಪ್ರಾರ್ಥನೆ
ಕೊರೊನಾ ಭೀತಿಯ ನಡುವೆಯೂ ಜಿಲ್ಲೆಯ ಸಂಪ್ರದಾಯಸ್ಥ ಮಹಿಳೆಯರು ನಗರದ ದುರ್ಗಾದೇವಿ ದೇವಸ್ಥಾನಕ್ಕೆ ಆಗಮಿಸಿ ವಿಶಿಷ್ಟ ಪೂಜೆ ಸಲ್ಲಿಸುವ ಮೂಲಕ ಕಾರ ಹುಣ್ಣಿಮೆ ಆಚರಿಸಿದರು. ದೇವಸ್ಥಾನದ ಆವರಣದಲ್ಲಿರುವ ಆಲದ ಮರಕ್ಕೆ ದಾರ ಸುತ್ತಿ ತಮ್ಮ ಗಂಡನ ಆಯಸ್ಸು ವೃದ್ಧಿಯಾಗಲಿ ಎಂದು ಪ್ರಾರ್ಥಿಸುತ್ತ ಮರ ಸುತ್ತುವ ದೃಶ್ಯಗಳು ಕಂಡುಬಂದವು.