ಕಾರಹುಣ್ಣಿಮೆ.. ಎತ್ತುಗಳೊಂದಿಗೆ ಕರಿ ಹರಿದು ಸಂಭ್ರಮಿಸಿದ ಕೃಷಿಕರು! - ಕಾರಹುಣ್ಣಿಮೆ ಆಚರಣೆ
ಸುರಪುರ ತಾಲೂಕಿನ ಶಖಾಪುರ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಇಂದು ಎತ್ತುಗಳ ಕರಿ ಹರಿಯುವ ಆಚರಣೆ ನಡೆಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ರೈತರು ಜಾನುವಾರುಗಳನ್ನು ಸಿಂಗರಿಸಿ ಅವುಗಳನ್ನು ಪೂಜೆ ಮಾಡುವುದು ಕಾರಹುಣ್ಣಿಮೆಯ ವಿಶೇಷ. ಅದೇ ರೀತಿ ಸಂಜೆ ವೇಳೆ ಗ್ರಾಮಸ್ಥರೆಲ್ಲರೂ ಸೇರಿ ತಮ್ಮ ತಮ್ಮ ಎತ್ತುಗಳನ್ನು ಊರ ಹೊರ ಭಾಗದ ಅಗಸಿಯಲ್ಲಿ ಸೇರಿಸಿ ಕರಿ ಹರಿದರು. ಕರಿ ಹರಿಯುವ ವೇಳೆ ಮೊದಲು ಬಂದ ಎತ್ತುಗಳಿಗೆ ಇಲ್ಲಿ ಬಹುಮಾನ ಸಹ ನೀಡಲಾಯ್ತು.