ಅಬ್ಬಾ... ಏನೀ ರಮಣೀಯ ದೃಶ್ಯ, ಕಪ್ಪತ್ತಗುಡ್ಡ ಸೌಂದರ್ಯವನ್ನು ನೀವೊಮ್ಮೆನೋಡಿಬಿಡಿ! - ಗದಗ ಕಪ್ಪತ್ತಗುಡ್ಡ ಲೆಟೆಸ್ಟ್ ನ್ಯೂಸ್
ಉತ್ತರ ಕರ್ನಾಟಕದ ಸಹ್ಯಾದ್ರಿ ಅಂತಾನೇ ಪ್ರಸಿದ್ಧಿ ಹೊಂದಿರುವ ಕಪ್ಪತ್ತಗುಡ್ಡ ಗದಗ ಜಿಲ್ಲೆಯ ಹಿರಿಮೆ. ಮುಂಜಾನೆ ವೇಳೆ ಈ ಗುಡ್ಡದ ಸೌಂದರ್ಯ, ರಮಣೀಯ ದೃಶ್ಯಗಳನ್ನ ಸವಿಯೋಕೆ ಎರಡು ಕಣ್ಣು ಸಾಲದು. ಆಗತಾನೆ ಹುಟ್ಟುವ ಸೂರ್ಯ, ಹಕ್ಕಿಗಳ ಚಿಲಿಪಿಲಿ, ನವಿಲುಗಳ ನರ್ತನ, ಪ್ರಾಣಿಗಳ ಚೀರಾಟ ಕೇಳಿದ್ರೆ ಯಾವುದೋ ಒಂದು ಪ್ರಪಂಚಕ್ಕೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ. ಇಂತಹ ಅದ್ಭುತ ಸೌಂದರ್ಯವನ್ನು ತನ್ನ ಒಡಲಲ್ಲಿಟ್ಟುಕೊಂಡು ಪ್ರವಾಸಿಗರಿಗೆ ರಸದೌತಣ, ಮನರಂಜನೆ ನೀಡುವ ಕಪ್ಪತ್ತಗುಡ್ಡಕ್ಕೆ ಒಮ್ಮೆ ಭೇಟಿ ನೀಡಿ ನೀವೂ ಕೂಡಾ ಪ್ರಕೃತಿ ಸೌಂದರ್ಯ ಸವಿಯಿರಿ.