ಕಪ್ಪತ್ತಗುಡ್ಡಕ್ಕೆ ಸದ್ಯಕ್ಕಿಲ್ಲ ಆಪತ್ತು: ಸಿಹಿಯೂಟ ಹಾಕಿಸಿದ ಶ್ರೀಗಳು! - ಸಂರಕ್ಷಿತ ಪ್ರದೇಶ
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಪ್ಪತ್ತಗುಡ್ಡದ ಕತ್ತು ಕೊಯ್ಯಲು ಸಜ್ಜಾಗಿದ್ದವು. ಇದಕ್ಕೆ ಸರ್ಕಾರ ಕೂಡ ಸಭೆ ಮಾಡಿ ಅಂತಿಮ ತೀರ್ಮಾನಕ್ಕೆ ರೆಡಿಯಾಗಿದ್ದರಿಂದ ಕಪ್ಪತ್ತಗುಡ್ಡಕ್ಕೆ ಕಾರ್ಮೋಡ ಕವಿದಿತ್ತು. ಆದ್ರೆ ಇದೀಗ ಸರ್ಕಾರ ಕಪ್ಪತ್ತಗುಡ್ಡಕ್ಕೆ ಸದ್ಯ ಕೈ ಹಾಕೋದು ಬೇಡ ಅಂತ ಹಿಂದೆ ಸರಿದಿದೆ. ಇದರಿಂದ ಸಂತಸಗೊಂಡ ಸ್ವಾಮೀಜಿ ಹಾಗೂ ಪರಿಸರ ಪ್ರೇಮಿಗಳು ಸಿಹಿಯೂಟ ಮಾಡಿ ಸಂಭ್ರಮಿಸಿದ್ದಾರೆ.